ಮಿರ್ಚಿ ಕಾ ಸಾಲನ್ ಹೈದರಾಬಾದ್‍ನ ಒಂದು ಜನಪ್ರಿಯ ಮೆಣಸಿನಕಾಯಿ ಮತ್ತು ಕಡಲೇಕಾಯಿಯ ಮೇಲೋಗರ. ಇದನ್ನು ಹೈದರಾಬಾದಿ ಬಿರಿಯಾನಿ ಜೊತೆಗೆ ಬಡಿಸಲಾಗುತ್ತದೆ. ಈ ಖಾದ್ಯವು ಹಸಿರು ಮೆಣಸಿನಕಾಯಿ, ಕಡಲೇಕಾಯಿ, ಎಳ್ಳು, ಒಣ ಕೊಬ್ಬರಿ, ಜೀರಿಗೆ, ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್, ಅರಿಸಿನ ಪುಡಿ, ಪಲಾವ್ ಎಲೆ ಮತ್ತು ಗಟ್ಟಿ ಹುಣಸೆ ರಸವನ್ನು ಹೊಂದಿರುತ್ತದೆ. ಮಿರ್ಚಿ ಕಾ ಸಾಲನ್ ಮದುವೆಗಳು ಮತ್ತು ವಿಶೇಷ ಸಮಾರಂಭಗಳಲ್ಲಿ ತಯಾರಿಸಲಾದ ಒಂದು ಸಾಂಪ್ರದಾಯಿಕ ಹೈದರಾಬಾದಿ ಖಾದ್ಯ. ಇದು ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಲಾದ ಒಂದು ಖಾರದ ಭಕ್ಷ್ಯ. ಮೆಣಸಿನಕಾಯಿಯನ್ನು ಸಂಬಾರ ಪದಾರ್ಥಗಳಲ್ಲಿ ಬೇಯಿಸಲಾಗುತ್ತದೆ, ಮತ್ತು ಕಡಲೇಕಾಯಿಯು ಈ ಖಾದ್ಯಕ್ಕೆ ತರಿತರಿಯಾದ ರೂಪವನ್ನು ನೀಡುತ್ತದೆ. ಮೂಲತಃ ಇದನ್ನು ಭಾರತದಲ್ಲಿ ಲಭ್ಯವಾದ ಉದ್ದನೆಯ ಖಾರದ ಮೆಣಸಿನಕಾಯಿಗಳಿಂದ ತಯಾರಿಸಲಾಗುತ್ತದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 2018-04-05 ವೇಬ್ಯಾಕ್ ಮೆಷಿನ್ ನಲ್ಲಿ.